kannada rajyotsava songs lyrics-ide naadu ide bhashe lyrics in kannada

Movie Name                : Tirugu Bana

Release Date              : 1983

Music by                     : Sathyam

Singers                        : SPB

Lyricist                        : R.N Jaygopal

Star cast                     : Ambrish, Arathi.

Directed By                : K.S.R Dass

Produced By              : S Sangram Singh, S Jayaraj Singh  

Record lable              : Sangeetha

kannada rajyotsava songs lyrics- namma nadu namma nudi song lyrics in kannada


ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ,

ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ - |3|


ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು,

ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು

ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು 

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ,

ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ||


ಚಾಮುಂಡಿ ರಕ್ಷೆಯು ನಮಗೆ, ಗೊಮಟೆಷ ಕಾವಲು ಇಲ್ಲಿ,

ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ,

ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು


ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ,

ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿವೆ

ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ


ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ,

ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ........


image source:srs media vision

Also check: Chamundi Thayi Anne। aptharakshaka Kannada movie songs lyrics    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು