kannada ene kunidaaduvudennede lyrics
ರಚನೆ: ಕುವೆಂಪು
ಸಂಗೀತ: ಸುನೀತಾ ಅನಂತಸ್ವಾಮಿ
ಗಾಯನ : ಅನಿತಾ ಅನಂತಸ್ವಾಮಿ
ನಿತಿನ್ ರಾಜರಾಂ ಶಾಸ್ತ್ರಿ
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
ತೆಕ್ಕನೆ ಮನ ಮೈ ಮರೆಯುವುದು
ಕನ್ನಡ ಕನ್ನಡ ಹ! ಸವಿಗನ್ನಡ
ಕನ್ನಡದಲಿ ಹರಿ ಬರೆಯುವನು
ಕನ್ನಡದಲಿ ಹರ ತಿರಿಯುವನು
ಕನ್ನಡ ಕನ್ನಡ ಹ! ಸವಿಗನ್ನಡ
ಕನ್ನಡದಲಿ ಹರಿ ಬರೆಯುವನು
ಕನ್ನಡದಲಿ ಹರ ತಿರಿಯುವನು
ಕನ್ನಡದಲ್ಲಿಯೇ ಬಿನ್ನಹ ಗೈದೊಡೆ
ಹರಿ ವರಗಳ ಮಳೆ ಕರೆಯುವನು
ಹರ ಮುರಿಯದೆ ತಾ ಪೊರೆಯುವನು
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಬಾಳುಹುದೇತಕೆ ? ಬಾಳುಹುದೇತಕೆ ? ಬಾಳುಹುದೇತಕೆ ? ಬಾಳುಹುದೇತಕೆ ?
ನುಡಿ, ಎಲೆ ಜೀವ
ಸಿರಿಗನ್ನದದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ
ಕನ್ನಡ ತಾಯಿಯ ಸೇವೆಯ ಮಾಡೆ
kannada ene kunidaaduvudennede lyrics
ಸೇವೆಯ ಮಾಡೆ
ಸೇವೆಯ ಮಾಡೆ
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
kannada ene kunidaaduvudennede lyrics
0 ಕಾಮೆಂಟ್‌ಗಳು