ಚಲನಚಿತ್ರ : Amurtha Ghalige
ಬಿಡುಗಡೆ ವರ್ಷ : 1984
ಸಂಗೀತ : Vijaya Bhaskar
ಗಾಯಕ : P jayachandran
ಸಾಹಿತ್ಯ : ಘೌಸ್ ಪೀರ್
ಸ್ಟಾರ್‌ಕಾಸ್ಟ್ :Ramakrishna, Padma Vasanthi, Sridhar
ನಿರ್ದೇಶಕ : Puttanna Kanagal
ನಿರ್ಮಾಪಕ : S. R. Rajan,Bheema Rao,K Nagarathna,Puttanna Kanagal
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು!
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |2|
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು |2|
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು |2|
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |2|
kannada desha bhakthi geethegalu list
puttanna kanagal hit songs :old hit songs kannada songs-kannada - hit songs amrutha galige kannada movie songs :

0 ಕಾಮೆಂಟ್‌ಗಳು