ಹೇ ಸಿಂಗಾರ ಸಿರಿಯೆ : Kantara kannada movie lyrics -2022

 Movie Name                : KANTARA

Release Date              : 30 September 2022

Music by                     : B. Ajaneesh Loknath

Singers                        : Vijay Prakash, Ananya Bhat

Lyricist                        :  Pramod Maravante

Star cast                      : Rishab Setty, Kishore, Achyuth Kumar

Directed By                 : Rishab Setty 

Produced By              : Hombale Films


                                               ಕುಂದಾಪುರ ಜಾನಪದ ಹಾಡು .......

Male version : ಹೇ ಸಿಂಗಾರ ಸಿರಿಯೆ
ಅಂಗಾಲಿನಲೆ ಬಂಗಾರ ಅಗೆವ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸೊ ಛಾಯೆ....

ಮಂದಹಾಸ ಹಾ ! ನಲುಮೆಯಾ ಶ್ರಾವಣ ಮಾಸಾ

ಮುದ್ದಾದ ಮಾಯಾಂಗಿ
ಮೌನದ ಸಾರಂಗಿ
ಮೋಹಕ ಮದರಂಗಿ

ಕನ್ನ ಹಾಕಿದೆ ಮುಂಗುರುಳ ಸೋಕಿ

ಕುಂದಾಪುರ ಜಾನಪದ .....

Male Version : ಮಾತಾಡುವ ಮಂದಾರವೆ
ಕಂಗೊಳಿಸಬೇಡ ಹೇಳದೆ

ನಾನೇತಕೆ ನಿನಗ್ ಹೇಳಲಿ
ನಿನ್ನ ಮೈಯ ‌ತುಂಬಾ ಕಣ್ಣಿದೆ

ಮನದಾಳದ ರಸಮಂಜರಿ
ರಂಗೇರಿ ನಿನ್ನ ಕಾದಿದೆ

Female version: ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿಯಾಗಿದೆ
Male version: ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….

Female version : ಕಣ್ಣಿಗೆ ಕಾಣೊ ಹೂವುಗಳೆಲ್ಲ
ಏನೊ ಕೇಳುತಿದೆ
ನಿನ್ನಯ ನೆರಳ ಮೇಲೆಯೆ ನೂರು
ಚಾಡಿ ಹೇಳುತಿದೆ

Male version : ಸಿಂಗಾರ ಸಿರಿಯೆ
ಅಂಗಾಲಿನಲೆ ಬಂಗಾರ ಅಗೆವ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸೊ ಛಾಯೆ

ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ

ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ‌ ಮಾಡುವೆ

ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ‌ ಹಾಕಿದೆ

Female version : ನಾ ಕಾಣುವ ಕನಸಲ್ಲಿಯೆ
ನೀನ್ಯಾಕೆ ಬೇಲಿ ಹಾರುವೆ

Male version : ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….

Female version: ಸುಂದರವಾದ ಸೋಜಿಗವೆಲ್ಲ
ಕಣ್ಣ ಮುಂದೆ ಇದೆ
ಬಣ್ಣಿಸ ಬಂದ ರೂಪಕವೆಲ್ಲ
ತಾನೆ ಸೋಲುತಿದೆ

Male version: ಮಂದಹಾಸ ನಲುಮೆಯ ಶ್ರಾವಣ ಮಾಸ....

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು