ಚಲನಚಿತ್ರ : Chandramukhi Pranasakhi
ಬಿಡುಗಡೆ ವರ್ಷ
: 30 july 1999
ಸಂಗೀತ
: K. Kalyan
ಗಾಯಕ
: SPB, K.S Chithra
ಸಾಹಿತ್ಯ
: K. Kalyan
ಸ್ಟಾರ್‌ಕಾಸ್ಟ್ : Ramesh, Bhavan, Pream.
ನಿರ್ದೇಶಕ : Seetharam Karanth
ನಿರ್ಮಾಪಕ : N.K Prakash Babu
ರೆಕಾರ್ಡ್ ಲೇಬಲ್ : Lahari music
nenapugala maathu madhura kannada song lyrics :
ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ
ಕನಸೇ ಇರಲಿ ನನಸೆ ಇರಲಿ
ಪ್ರೀತಿ ಕೊಡುವ ಕನಸೇ ಮಧುರ
ಸಾವಿರ ಹೂಗಳ ಹುಡುಕಿದರೂ
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೆ
ಸಾವಿರ ಹೃದಯವ ಹುಡುಕಿದರೂ
ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೆ
ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೋ ಪ್ರೀತಿ
ಗಾಳಿಯ ಗಂಧವ ಕಡೆದು ಅಂದವ ಹೆಣೆಯೋ ಪ್ರೀತಿ
ಸಂಖ್ಯೆ ಇರದೇ ಗುಣಿಸೋ ಪ್ರೀತಿ
ನಿದ್ದೆ ನುಂಗಿ ಕುಣಿಸೋ ಪ್ರೀತಿ
ಶಬ್ದವಿರಲಿ ಶಬ್ದವಿರಲಿ ಪ್ರೀತಿ ಕೊಡುವ ಶಬ್ದ ಮಧುರ
ಸಾವಿರ ಹಾಡನು ಹುಡುಕಿದರೂ
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೆ
ಸಾವಿರ ಪ್ರೇಮಿಯ ಹುಡುಕಿದರೂ
ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೆ
ನದಿಗಳ ಕಲರವಗಳಲಿ ಅಲೆಗಳು ತೊಯೋ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೋ ಪ್ರೀತಿ
ಚಿಲುಮೆಯಂತೆ ಚಿಮ್ಮೋ ಪ್ರೀತಿ
ಒಲುಮೆಯೊಳಗೆ ಕಾಯ್ಸೋ ಪ್ರೀತಿ
ಸ್ವಾರ್ಥವಿರಲಿ ಸ್ವಾರ್ಥವಿರಲಿ ಪ್ರೀತಿ ಕೊಡುವ ಸ್ವಾರ್ಥ ಮಧುರ
0 ಕಾಮೆಂಟ್‌ಗಳು